
ಬೀದರ್‌ನ ಗುನ್ನಳ್ಳಿ ಗ್ರಾಮದ ಕಲಾವಿದ ಹಣಮಂತ ಮಲ್ಕಾಪುರೆ ಅವರು ಕಳೆದ 8 ವರ್ಷಗಳಿಂದ ರಾಸಾಯನಿಕ ಬಣ್ಣ ಬಳಸದೆ ತಯಾರಿಸುತ್ತಿರುವ ನೈಸರ್ಗಿಕ ಮಣ್ಣಿನ ಗಣಪತಿ ಮೂರ್ತಿಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.
ಈ ಕಲಾವಿದ 4 ರಿಂದ 14 ಇಂಚಿನವರೆಗಿನ 300ಕ್ಕೂ ಹೆಚ್ಚು ಮಣ್ಣಿನ ಗಣಪತಿ ವಿಗ್ರಹಗಳನ್ನು ಈಗಾಗಲೇ ಸಾರ್ವಜನಿಕರಿಗೆ ಮುಂಗಡವಾಗಿ ಮಾರಾಟ ಮಾಡಿದ್ದಾರೆ.
ಮಣ್ಣಿನ ಗಣಪತಿಯನ್ನು ಪೂಜಿಸಿ ಮನೆಯಲ್ಲೇ ವಿಸರ್ಜಿಸುವುದರಿಂದ ಜಲಮಾಲಿನ್ಯವನ್ನು ತಡೆಗಟ್ಟಬಹುದು ಎಂದು ಕಲಾವಿದ ಹಣಮಂತ ಮಲ್ಕಾಪುರೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.