
ನಯನತಾರಾ ನಟನೆಯ 'ಹಾಯ್' ಸಿನಿಮಾ ಆಗಸ್ಟ್ 28 ರಂದು ಬಿಡುಗಡೆಯಾಗಲಿದ್ದು, ಇದಕ್ಕೂ ಎರಡು ದಿನಗಳ ಮೊದಲು ಆಗಸ್ಟ್ 26 ರಂದು ಅವರು ನಟಿಸಿರುವ 'ಟಾಕ್ಸಿಕ್' ಸಿನಿಮಾ ತೆರೆಕಾಣಲಿದೆ.
ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದಲ್ಲಿ ನಯನತಾರಾ ಗಂಗಾ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಕವಿನ್ ಜೊತೆಗಿನ 'ಹಾಯ್' ಚಿತ್ರದಲ್ಲಿ ಅವರು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಒಂದೇ ವಾರದಲ್ಲಿ ನಯನತಾರಾ ಅವರ ಎರಡು ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಬಾಕ್ಸ್ ಆಫೀಸ್ನಲ್ಲಿ ಕುತೂಹಲ ಮೂಡಿಸಿದೆ.