
ಉತ್ತರ ಕನ್ನಡ ಜಿಲ್ಲಾ ನ್ಯಾಯಾಲಯವು ಜವಾನ ಹುದ್ದೆಗೆ 65 ಮತ್ತು ಆದೇಶ ಜಾರಿಕಾರ ಹುದ್ದೆಗೆ 13 ಸೇರಿದಂತೆ ಒಟ್ಟು 78 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಅಭ್ಯರ್ಥಿಗಳು ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಜವಾನರಿಗೆ 27,000 ರಿಂದ 46,675 ರೂ. ಮತ್ತು ಆದೇಶ ಜಾರಿಕಾರರಿಗೆ 27,300 ರಿಂದ 61,300 ರೂ. ವರೆಗೆ ಮಾಸಿಕ ವೇತನ ದೊರೆಯಲಿದೆ.