
ಬಾಲಿಯಲ್ಲಿ ಭೇಟಿಯಾದ ಭಾರತೀಯ ಯೂಟ್ಯೂಬರ್ ಅಭಿನವ್ ರೆಡ್ಡಿ ಮತ್ತು ಜರ್ಮನ್ ಪ್ರವಾಸಿ ಸಫೀರಾ ಅವರ ಸ್ನೇಹ ಪ್ರೀತಿಗೆ ತಿರುಗಿದ್ದು, ಇದೀಗ ಮದುವೆಯ ಹಂತಕ್ಕೆ ಬಂದಿದೆ.
ಸಫೀರಾ ತನ್ನ ಜರ್ಮನಿಯ ಮನೆಯನ್ನು ಅಭಿನವ್ಗೆ ತೋರಿಸಿದ್ದು, ಅಲ್ಲಿನ ಸಂಸ್ಕೃತಿ ಮತ್ತು ಬಾಲ್ಯದ ನೆನಪುಗಳನ್ನು ಹಂಚಿಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಜರ್ಮನಿ ಮತ್ತು ಭಾರತದ ಸಾಂಸ್ಕೃತಿಕ ವ್ಯತ್ಯಾಸಗಳ ಬಗ್ಗೆ ಮುಕ್ತವಾಗಿ ಚರ್ಚಿಸಿರುವ ಈ ಜೋಡಿಯ ಕೆಮಿಸ್ಟ್ರಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.