
ಮಂಗಳೂರು ಜಂಕ್ಷನ್ನಿಂದ ಯಶವಂತಪುರಕ್ಕೆ ಸೆಪ್ಟೆಂಬರ್ 10ರಂದು ನಡೆದ ಎರಡನೇ ಪ್ರಯೋಗಾರ್ಥ ಸಂಚಾರದಲ್ಲಿ ವಂದೇ ಭಾರತ್ ರೈಲು 6 ಗಂಟೆ 49 ನಿಮಿಷಗಳಲ್ಲಿ ತಲುಪಿದೆ.
ಸೆಪ್ಟೆಂಬರ್ 5ರ ಮೊದಲ ಟ್ರಯಲ್ನಲ್ಲಿ ತಾಂತ್ರಿಕ ತೊಂದರೆ ಎದುರಾಗಿದ್ದರಿಂದ ನೈಋತ್ಯ ರೈಲ್ವೆ ಗುರುವಾರ ಎರಡನೇ ಬಾರಿ ಈ ಟ್ರಯಲ್ ನಡೆಸಿತ್ತು.
ಈ ಸಂಚಾರದಿಂದ ಮಂಗಳೂರು-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಏಳು ಗಂಟೆಯೊಳಗೆ ಪೂರ್ಣಗೊಳ್ಳುವ ಸಾಧ್ಯತೆ ದೃಢಪಟ್ಟಿದೆ.