
ರಾಜ್ಯದ ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ನಡೆಸಿದ ದಾಳಿಯಲ್ಲಿ ಕೆ.ಆರ್. ಪುರಂ, ಮೈಸೂರು ಮತ್ತು ಹಾವೇರಿ ನಿಲ್ದಾಣಗಳಲ್ಲಿ ಕಳಪೆ ಆಹಾರ ಪತ್ತೆಯಾಗಿದೆ.
ಮೈಸೂರಿನಲ್ಲಿ ಪ್ಲಾಸ್ಟಿಕ್ ಬಳಸಿ ಇಡ್ಲಿ ತಯಾರಿಕೆ, ಹಾವೇರಿಯಲ್ಲಿ ಅವಧಿ ಮೀರಿದ ಹಾಲು-ಮೊಸರು ಮತ್ತು ನಿಷೇಧಿತ ಬಣ್ಣಗಳ ಬಳಕೆ ಕಂಡುಬಂದಿದ್ದು, ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
ಪ್ರಯಾಣಿಕರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿರುವ ಮಳಿಗೆಗಳ ಮಾಲೀಕರಿಗೆ ಕಠಿಣ ಕ್ರಮದ ಎಚ್ಚರಿಕೆ ನೀಡಲಾಗಿದ್ದು, ನಿಲ್ದಾಣಗಳಲ್ಲಿನ ಅನೈರ್ಮಲ್ಯದ ವಾತಾವರಣದ ಬಗ್ಗೆ ವರದಿ ಮಾಡಲಾಗಿದೆ.