
ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಪ್ರಕ್ರಿಯೆಯು ಅಂತಿಮ ಘಟ್ಟ ತಲುಪಿದ್ದು, ರಾಜ್ಯಾದ್ಯಂತ 2.8 ಲಕ್ಷಕ್ಕೂ ಅಧಿಕ ವಿಚಾರಣೆಗಳು ಬಾಕಿ ಇವೆ.
ಒಟ್ಟು ಪ್ರಕರಣಗಳಲ್ಲಿ ಸುಮಾರು 1.8 ಲಕ್ಷ ಪ್ರಕರಣಗಳು ಕೇವಲ ಬೆಂಗಳೂರು ನಗರ ಹಾಗೂ ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಿಸಿವೆ.
ಮತದಾರರ ಪಟ್ಟಿಯ ಹಕ್ಕು ಹಾಗೂ ಆಕ್ಷೇಪಣೆಗಳ ಇತ್ಯರ್ಥಕ್ಕೆ ಅಕ್ಟೋಬರ್ 22 ಕೊನೆಯ ದಿನವಾಗಿದ್ದು, ಅಂತಿಮ ಪಟ್ಟಿ ಅಕ್ಟೋಬರ್ 27ರಂದು ಪ್ರಕಟವಾಗಲಿದೆ.