
ವಾಣಿಜ್ಯ ಸಿಲಿಂಡರ್ ಬೆಲೆ ಮಾರ್ಚ್ನಲ್ಲಿ 1,845 ರೂಪಾಯಿ ಇದ್ದದ್ದು ಸೆಪ್ಟೆಂಬರ್ನಲ್ಲಿ 2,832 ರೂಪಾಯಿಗೆ ಏರಿಕೆಯಾಗಿದ್ದು, ಹೋಟೆಲ್ಗಳಲ್ಲಿ ಕಾಫಿ-ಟೀ ದರವನ್ನು 3 ರಿಂದ 5 ರೂಪಾಯಿ ಹೆಚ್ಚಿಸಲಾಗಿದೆ.
ಸಕ್ಕರೆ ಬೆಲೆ ಕೆಜಿಗೆ 56 ರೂಪಾಯಿ ಮತ್ತು ಬೆಲ್ಲದ ಬೆಲೆ 60 ರೂಪಾಯಿಗೆ ಮಾರಾಟವಾಗುತ್ತಿದ್ದು, ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಗ್ರಾಹಕರಿಗೆ ದಿನಕ್ಕೆ 20 ರಿಂದ 25 ರೂಪಾಯಿ ಹೆಚ್ಚುವರಿ ಹೊರೆಯಾಗುತ್ತಿದೆ.
ಸಿಲಿಂಡರ್, ಬಾಡಿಗೆ ಮತ್ತು ನೌಕರರ ವೇತನ ಹೆಚ್ಚಳದಿಂದಾಗಿ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ದರ ಏರಿಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಊಟ-ತಿಂಡಿಯ ದರವೂ ಏರಿಕೆಯಾಗುವ ಸಾಧ್ಯತೆಯಿದೆ.