
ಬೆಂಗಳೂರಿನ ವಾರ್ಥೂರು ರಸ್ತೆಯಲ್ಲಿ ಮಳೆ ನೀರು ತುಂಬಿದ್ದ ಗುಂಡಿಯನ್ನು ಗಮನಿಸದೆ ಬಿದ್ದ ಮಹಿಳೆ ಐಶಾನಿ, ಹಿಮ್ಮಡಿಯ ಮೂಳೆ ಮುರಿದುಕೊಂಡು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಅಪಘಾತದಿಂದಾಗಿ ಐಶಾನಿ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಖಾಸಗಿ ಆಸ್ಪತ್ರೆಯ ಬಿಲ್ ಬರೋಬ್ಬರಿ 1.97 ಲಕ್ಷ ರೂಪಾಯಿಗಳಷ್ಟಾಗಿದೆ.
ಬಿಬಿಎಂಪಿಯ ನಿರ್ಲಕ್ಷ್ಯದಿಂದಾಗಿ ತಮಗೆ ಆದ ಆರ್ಥಿಕ ನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತೆ ಐಶಾನಿ ಎಕ್ಸ್ ಖಾತೆ ಮೂಲಕ ಆಗ್ರಹಿಸಿದ್ದಾರೆ.