
ಐಐಟಿ ಮದ್ರಾಸ್ನ ಹಳೆಯ ವಿದ್ಯಾರ್ಥಿ ಡಾ. ಕೃಷ್ಣ ಚಿವುಕುಲ ಅವರ ಇಂಡೋ-ಮಿಮ್ ಕಂಪನಿಯ ಐಪಿಒ ಯಶಸ್ಸಿನಿಂದಾಗಿ ಸಂಸ್ಥೆಗೆ 112 ಕೋಟಿ ರೂ. ನಗದು ಆದಾಯ ಲಭಿಸಿದೆ.
2024ರ ಫೆಬ್ರವರಿಯಲ್ಲಿ ಡಾ. ಕೃಷ್ಣ ಚಿವುಕುಲ ಅವರು 228 ಕೋಟಿ ರೂ. ಮೌಲ್ಯದ ಷೇರುಗಳನ್ನು ದಾನ ನೀಡಿದ್ದು, ಇದು ಭಾರತದ ಶೈಕ್ಷಣಿಕ ಸಂಸ್ಥೆಯೊಂದಕ್ಕೆ ಹಳೆಯ ವಿದ್ಯಾರ್ಥಿ ನೀಡಿದ ಮೂರನೇ ಅತಿ ದೊಡ್ಡ ಕೊಡುಗೆಯಾಗಿದೆ.
ಈ ನಗದು ಮೊತ್ತವನ್ನು ಐಐಟಿ ಮದ್ರಾಸ್ ತನ್ನ ಸಂಶೋಧನೆ, ನಾವೀನ್ಯತೆ ಮತ್ತು ಪ್ರಯೋಗಾಲಯಗಳ ಅಭಿವೃದ್ಧಿಗಾಗಿ ಬಳಸಿಕೊಳ್ಳಲಿದ್ದು, ಕ್ಯಾಂಪಸ್ನ ಒಂದು ಬ್ಲಾಕ್ಗೆ ದಾನಿಯ ಹೆಸರನ್ನು ಇಡಲಾಗಿದೆ.