
ಐಪಿಎಲ್‌ನ ಮುಂಬರುವ 2027ನೇ ಆವೃತ್ತಿಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತೀಯ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರನ್ನು ಅಧಿಕೃತವಾಗಿ ನೇಮಿಸಲಾಗಿದೆ.
ಈ ಹಿಂದೆ 2019ರಲ್ಲಿ ಸಲಹೆಗಾರರಾಗಿ ಹಾಗೂ ಡೈರೆಕ್ಟರ್ ಆಫ್ ಕ್ರಿಕೆಟ್ ಆಗಿ ಕಾರ್ಯನಿರ್ವಹಿಸಿದ್ದ ಗಂಗೂಲಿ, ಈಗ ಹೇಮಂಗ್ ಬದಾನಿ ಅವರಿಂದ ಪೂರ್ಣ ಪ್ರಮಾಣದ ಮುಖ್ಯ ಕೋಚ್ ಜವಾಬ್ದಾರಿಯನ್ನು ಪಡೆದುಕೊಂಡಿದ್ದಾರೆ.
ದಶಕಗಳಿಂದ ತಂಡದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಸೌರವ್ ಗಂಗೂಲಿ ಅವರ ನೇತೃತ್ವದಲ್ಲಿ ತಂಡವನ್ನು ಬಲಿಷ್ಠಗೊಳಿಸಿ ಚಾಂಪಿಯನ್ ಪಟ್ಟಕ್ಕೇರಿಸುವ ವಿಶ್ವಾಸವನ್ನು ಮಾಲೀಕ ಪಾರ್ಥ್ ಜಿಂದಾಲ್ ವ್ಯಕ್ತಪಡಿಸಿದ್ದಾರೆ.