
ದೇಶದ ಎಲ್ಲ ರಸ್ತೆಗಳಲ್ಲೂ ಪಾದಚಾರಿಗಳಿಗೆ ಪ್ರತ್ಯೇಕ ಹಾಗೂ ಅತಿಕ್ರಮಣ-ಮುಕ್ತ ಸ್ಥಳ ಖಚಿತಪಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ.
ಪಾದಚಾರಿ ಮಾರ್ಗ ರಚಿಸಲು ಕಾಂಕ್ರೀಟ್ ನಿರ್ಮಾಣ ಅಗತ್ಯವಿಲ್ಲ, ಹಗ್ಗ ಅಥವಾ ಬಣ್ಣದ ಲೈನ್ಗಳ ಬಳಕೆಗೂ ಸಲಹೆ ನೀಡಿದೆ.
ಭಾರತೀಯ ಸಂವಿಧಾನದ ಆರ್ಟಿಕಲ್ 21ರ ಅಡಿಯಲ್ಲಿ ಪಾದಚಾರಿ ಮಾರ್ಗಗಳಲ್ಲಿ ನಡೆಯುವ ಹಕ್ಕು ಮೂಲಭೂತ ಹಕ್ಕಾಗಿದೆ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.