
ಸ್ಲೊವಾಕಿಯಾದಲ್ಲಿ ನಡೆಯುತ್ತಿರುವ ವಿಶ್ವ 20 ವರ್ಷದೊಳಗಿನವರ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಭಾರತದ 18 ವರ್ಷದ ಕಾಜಲ್ ಧೋಚಕ್ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ.
76 ಕೆ.ಜಿ. ವಿಭಾಗದ ಫೈನಲ್ನಲ್ಲಿ ಕಾಜಲ್ ಅವರು ಚೀನಾದ ಜಿಂಗ್ರು ಸನ್ ಅವರನ್ನು ಮಣಿಸಿದರೆ, ತನು ಶರ್ಮಾ ಮತ್ತು ಸವಿತಾ ಅವರು ಕ್ರಮವಾಗಿ ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡರು.
72 ಕೆ.ಜಿ. ವಿಭಾಗದಲ್ಲಿ ತನು ಶರ್ಮಾ 3–5 ಅಂತರದಿಂದ ಜಪಾನ್ನ ಚಿಸಾಟೊ ಯೊಶಿದಾ ಎದುರು ಸೋತರೆ, 62 ಕೆ.ಜಿ. ವಿಭಾಗದಲ್ಲಿ ಸವಿತಾ ಅವರು 2–12 ಅಂತರದಿಂದ ಸಕುರಾ ಒನಿಶಿ ವಿರುದ್ಧ ಪರಾಭವಗೊಂಡರು.