
ವಿಧಾನಸಭೆಯಲ್ಲಿ ಗುರುವಾರ ‘ಕರ್ನಾಟಕ ಪುರಸಭೆಗಳ (ತಿದ್ದುಪಡಿ) ವಿಧೇಯಕ 2026’ ಮತ್ತು ‘ಕರ್ನಾಟಕ ಮಹಾನಗರ ಪಾಲಿಕೆಗಳ (ತಿದ್ದುಪಡಿ) ವಿಧೇಯಕ 2026’ ಅನ್ನು ವಿಪಕ್ಷಗಳ ಗದ್ದಲದ ನಡುವೆ ಅಂಗೀಕರಿಸಲಾಗಿದೆ.
ಹೊಸ ಮಸೂದೆಯ ಪ್ರಕಾರ, ಹದಗೆಟ್ಟ ಖಾಸಗಿ ರಸ್ತೆ ಮತ್ತು ಚರಂಡಿಗಳನ್ನು ಮುನ್ಸಿಪಲ್ ಕಮಿಷನರ್ಗಳು ಸಾರ್ವಜನಿಕ ಆಸ್ತಿಯೆಂದು ಘೋಷಿಸಿ ನೇರವಾಗಿ ತಮ್ಮ ಸುಪರ್ದಿಗೆ ಪಡೆದು ಅಭಿವೃದ್ಧಿಪಡಿಸಬಹುದು.
ಈ ರಸ್ತೆಗಳನ್ನು ವಶಪಡಿಸಿಕೊಂಡ ನಂತರ ಮೂಲ ಭೂಮಾಲೀಕರಿಗೆ ಯಾವುದೇ ಹಣಕಾಸಿನ ಪರಿಹಾರ ಅಥವಾ ಟಿಡಿಆರ್ (TDR) ಸೌಲಭ್ಯ ಸಿಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.