
ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದಾಗಿ ಪ್ರಮುಖ ಜಲಾಶಯಗಳ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದ್ದು, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಸಂಗ್ರಹ ಕಡಿಮೆಯಾಗಿದೆ.
ಉತ್ತರ ಕರ್ನಾಟಕದ ಆಲಮಟ್ಟಿ ಜಲಾಶಯದಲ್ಲಿ ಶೇ. 99.5ಕ್ಕೂ ಹೆಚ್ಚು ನೀರು ಸಂಗ್ರಹಗೊಂಡು ಭರ್ತಿಯಾಗುವ ಅಂತಿಮ ಹಂತ ತಲುಪಿದೆ.
ಕೃಷ್ಣರಾಜ ಸಾಗರ (KRS) ಜಲಾಶಯದಲ್ಲಿ ನೀರಿನ ಮಟ್ಟ ಶೇ. 55.77ಕ್ಕೆ ಕುಸಿದಿದ್ದು, ಒಳಹರಿವಿಗಿಂತ ಹೊರಹರಿವು ಹೆಚ್ಚಿರುವುದರಿಂದ ಸಂಗ್ರಹ ಮತ್ತಷ್ಟು ಕಡಿಮೆಯಾಗುತ್ತಿದೆ.