
ಇಂಗ್ಲೆಂಡ್‌ನ ದಿ ಹಂಡ್ರೆಡ್ ಲೀಗ್‌ನಲ್ಲಿ ಎಂಐ ಲಂಡನ್ ಪರ ಆಡಿದ ಅಫ್ಘಾನಿಸ್ತಾನದ ರಶೀದ್ ಖಾನ್, ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್ ವಿರುದ್ಧ ಕೇವಲ 20 ಎಸೆತಗಳಲ್ಲಿ 5 ವಿಕೆಟ್ ಕಬಳಿಸಿದ್ದಾರೆ.
ರಶೀದ್ ಖಾನ್ 17 ರನ್ ನೀಡಿ ಟಿಮ್ ಸೈಫರ್ಟ್, ಜೋಸ್ ಬಟ್ಲರ್, ಹೆನ್ರಿಕ್ ಕ್ಲಾಸೆನ್, ಟಾಮ್ ಮೂರ್ಸ್ ಮತ್ತು ಲಿಯಾಮ್ ಡಾಸನ್ ಅವರ ವಿಕೆಟ್ ಪಡೆದು ಐತಿಹಾಸಿಕ ಸಾಧನೆ ಮಾಡಿದ್ದಾರೆ.
2021ರಲ್ಲಿ ಆರಂಭವಾದ ಈ ಲೀಗ್‌ನಲ್ಲಿ 5 ವಿಕೆಟ್ ಪಡೆದ 8ನೇ ಬೌಲರ್ ಎಂಬ ಹೆಗ್ಗಳಿಕೆಗೆ ರಶೀದ್ ಖಾನ್ ಪಾತ್ರರಾಗಿದ್ದಾರೆ.