
ಬೆಂಗಳೂರು ಪೊಲೀಸರು 'ಮಿಷನ್ RISE' ಮತ್ತು 'ಬೇಡ ಬ್ರೋ' ಅಭಿಯಾನದಡಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 55.8 ಕೋಟಿ ರೂಪಾಯಿ ಮೌಲ್ಯದ 200 ಕೆಜಿಗೂ ಅಧಿಕ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ 8 ವಿದೇಶಿಯರು ಮತ್ತು 21 ಅನ್ಯರಾಜ್ಯದವರು ಸೇರಿದಂತೆ ಒಟ್ಟು 39 ಆರೋಪಿಗಳನ್ನು ಬಂಧಿಸಲಾಗಿದ್ದು, 17 ಲಕ್ಷ ರೂಪಾಯಿ ನಗದು ಹಾಗೂ 22 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಅಮೃತಹಳ್ಳಿ ಪೊಲೀಸರು ದೆಹಲಿಯಲ್ಲಿ ತಯಾರಾಗುತ್ತಿದ್ದ 28.8 ಕೋಟಿ ರೂಪಾಯಿ ಮೌಲ್ಯದ MDMA ಜಾಲವನ್ನು ಭೇದಿಸಿದ್ದು, ದೆಹಲಿ ಮೂಲದ ಆಮ್ನಿ ಸಿಂಗ್ ಮತ್ತು ನೈಜೀರಿಯಾದ ಓಬಮ್ ಎಂಬುವವರನ್ನು ಬಂಧಿಸಿದ್ದಾರೆ.