
ಕಬ್ಬಿಣದ ಅದಿರು ಮತ್ತು ಸಿಮೆಂಟ್ ವಲಯಗಳಲ್ಲಿನ ಚಟುವಟಿಕೆ ಉತ್ತಮವಾಗಿದ್ದ ಕಾರಣ, ಸೆಪ್ಟೆಂಬರ್‌ನಲ್ಲಿ ಒಂಬತ್ತು ಪ್ರಮುಖ ಮೂಲಸೌಕರ್ಯ ವಲಯಗಳ ಬೆಳವಣಿಗೆ ಪ್ರಮಾಣವು ಶೇ 7.9ಕ್ಕೆ ಏರಿಕೆ ಕಂಡಿದೆ.
ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಬುಧವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಬೆಳವಣಿಗೆಯು ಶೇ 3.1ರಷ್ಟು ಇತ್ತು.
ಕಬ್ಬಿಣದ ಅದಿರಿನ ಉತ್ಪಾದನಾ ಪ್ರಮಾಣವು ಶೇ 18.4ರಷ್ಟು ಹಾಗೂ ವಿದ್ಯುತ್ ಉತ್ಪಾದನೆಯು ಶೇ 11.4ರಷ್ಟು ಹೆಚ್ಚಳ ದಾಖಲಿಸಿವೆ.