
ಜಮ್ಮು ಮತ್ತು ಕಾಶ್ಮೀರದ ಬನಿಹಾಲ್ನಲ್ಲಿ ರಕ್ಷಾಬಂಧನ ಹಬ್ಬದ ಅಂಗವಾಗಿ ಸ್ಥಳೀಯ ಮುಸ್ಲಿಂ ಯುವತಿಯರು ಮತ್ತು ಶಾಲಾ ಬಾಲಕಿಯರು ಗಡಿ ಕಾಯುವ ಸೈನಿಕರಿಗೆ ರಾಖಿ ಕಟ್ಟಿದರು.
ದೇಶದ ರಕ್ಷಣೆಗಾಗಿ ನಿಯೋಜಿತರಾಗಿರುವ ಯೋಧರಿಗೆ ತಿಲಕ ಹಚ್ಚಿ, ಸಿಹಿ ತಿನ್ನಿಸುವ ಮೂಲಕ ಯುವತಿಯರು ಜಾತಿ-ಧರ್ಮ ಮೀರಿ ಸಹೋದರತ್ವವನ್ನು ಸಾರಿದರು.
ಈ ವಿಶೇಷ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೈನಿಕರೊಂದಿಗೆ ಹಬ್ಬ ಆಚರಿಸಿದ ಕಾಶ್ಮೀರಿ ಯುವತಿಯರ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.