
ಉತ್ತರ ಪ್ರದೇಶದ 22 ವರ್ಷದ ಲಾವಣ್ಯ ಜೈನ್ ಬಿ.ಟೆಕ್ ಪದವಿಯನ್ನು ಅರ್ಧದಲ್ಲೇ ಬಿಟ್ಟರೂ, ಪ್ರಸ್ತುತ ಎಐ ಸ್ಟಾರ್ಟಪ್‌ಗಳಲ್ಲಿ ಕೆಲಸ ಮಾಡುತ್ತಾ ತಿಂಗಳಿಗೆ 4.8 ಲಕ್ಷ ರೂಪಾಯಿ ಗಳಿಸುತ್ತಿದ್ದಾರೆ.
ರನಬಲ್ ಎಂಬ ಎಐ ಸ್ಟಾರ್ಟಪ್‌ನಲ್ಲಿ ಕೆಲಸ ಮಾಡುವಾಗ ಕೇವಲ 10 ದಿನಗಳಲ್ಲಿ ಕಂಪನಿಯ ವಾರ್ಷಿಕ ಆದಾಯವನ್ನು ಸೊನ್ನೆಯಿಂದ 1 ಮಿಲಿಯನ್ ಡಾಲರ್‌ಗೆ ಏರಿಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಲಾವಣ್ಯ ಜೈನ್ ಪ್ರಸ್ತುತ ಐದು ಪ್ರತ್ಯೇಕ ಆದಾಯದ ಮೂಲಗಳನ್ನು ಹೊಂದಿದ್ದು, ತಮ್ಮ ಕೈಕೆಳಗೆ ಐಐಟಿ ಪದವೀಧರರು ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.