International
ಒಡಿಶಾ: ಬಂಗಾಳಕೊಲ್ಲಿಯಲ್ಲಿ ಮುಳುಗಿದ ಹಡಗಿನ 22 ಸಿಬ್ಬಂದಿಗಾಗಿ ತೀವ್ರಗೊಂಡ ಶೋಧ

ಒಡಿಶಾ: ಬಂಗಾಳಕೊಲ್ಲಿಯಲ್ಲಿ ಮುಳುಗಿದ ಹಡಗಿನ 22 ಸಿಬ್ಬಂದಿಗಾಗಿ ತೀವ್ರಗೊಂಡ ಶೋಧ

prajavani1h
THE BRIEF
1

ಒಡಿಶಾ ಕರಾವಳಿಯ ಬಂಗಾಳ ಕೊಲ್ಲಿಯಲ್ಲಿ ಮುಳುಗಿರುವ ಪನಾಮ ಧ್ವಜವಿದ್ದ ಸರಕು ಸಾಗಣೆ ಹಡಗಿನ 22 ಸಿಬ್ಬಂದಿಗಾಗಿ ಭಾರತೀಯ ಕರಾವಳಿ ರಕ್ಷಣಾ ಪಡೆ ಮತ್ತು ಭಾರತೀಯ ನೌಕಾಪಡೆಯು ಭಾನುವಾರ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

2

ಹಡಗಿನಲ್ಲಿ 24 ಮಂದಿ ಸಿಬ್ಬಂದಿ ಇದ್ದು, ಶನಿವಾರ ಭಾರತೀಯ ಕರಾವಳಿ ರಕ್ಷಣಾ ಪಡೆಯ ಮೂರು ಹಡಗುಗಳು ಮತ್ತು ಭಾರತೀಯ ನೌಕಾಪಡೆಯ ವಿಮಾನ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಚೀನಾ ಪ್ರಜೆಗಳನ್ನು ರಕ್ಷಿಸಲಾಗಿದೆ.

3

ಆಗಸ್ಟ್ 20 ರಂದು ಪಾರಾದೀಪ್ ಬಂದರಿನಿಂದ ಚೀನಾಕ್ಕೆ ಅದಿರು ಸಾಗಿಸುತ್ತಿದ್ದ 'ಎಂವಿ ಓಷನ್ ವಿನ್ನರ್' ಹಡಗಿನಲ್ಲಿ 20 ಚೀನಾ, 3 ಮ್ಯಾನ್ಮಾರ್ ಮತ್ತು 1 ಬಾಂಗ್ಲಾದೇಶದ ಪ್ರಜೆಗಳು ಇದ್ದರು.