
ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅಕ್ಟೋಬರ್ 3 ರಿಂದ 21 ರವರೆಗೆ ಒಟ್ಟು 19 ದಿನಗಳ ದಸರಾ ರಜೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಕಟಿಸಿದೆ.
ಅಕ್ಟೋಬರ್ 2 ರ ಗಾಂಧಿ ಜಯಂತಿಯ ಸಾರ್ವತ್ರಿಕ ರಜೆಯ ಮರುದಿನದಿಂದಲೇ ಅಧಿಕೃತವಾಗಿ ರಜೆಗಳು ಆರಂಭವಾಗಲಿದ್ದು, ವಿಜಯದಶಮಿಯ ಅಕ್ಟೋಬರ್ 21ರಂದು ಮುಕ್ತಾಯಗೊಳ್ಳಲಿವೆ.
ದಸರಾ ರಜೆಯ ಮುಕ್ತಾಯದ ನಂತರ ಅಕ್ಟೋಬರ್ 22 ರ ಗುರುವಾರದಂದು ಶಾಲೆಗಳು ಪುನರಾರಂಭಗೊಂಡು ಪ್ರಸಕ್ತ ಶೈಕ್ಷಣಿಕ ವರ್ಷದ ಎರಡನೇ ಅವಧಿಯು ಆರಂಭವಾಗಲಿದೆ.