Health & Environment
ಕರ್ನಾಟಕ ಎಫ್‌ಡಿಎ ಕಾರ್ಯಾಚರಣೆ: 254 ಔಷಧ ಕಂಪನಿಗಳ ಅಕ್ರಮ ದರ ಏರಿಕೆ ಬಯಲು

ಕರ್ನಾಟಕ ಎಫ್‌ಡಿಎ ಕಾರ್ಯಾಚರಣೆ: 254 ಔಷಧ ಕಂಪನಿಗಳ ಅಕ್ರಮ ದರ ಏರಿಕೆ ಬಯಲು

tv9kannada1h
THE BRIEF
1

ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಇಲಾಖೆಯು ಬಡ ರೋಗಿಗಳನ್ನು ಗುರಿಯಾಗಿಸಿಕೊಂಡು ಔಷಧಗಳು ಹಾಗೂ ವೈದ್ಯಕೀಯ ಉಪಕರಣಗಳ ಮೇಲೆ ಶೇ 60 ರಿಂದ 90 ಪಟ್ಟು ಹೆಚ್ಚು ದರ ನಿಗದಿಪಡಿಸಿ ಸುಲಿಗೆ ಮಾಡುತ್ತಿದ್ದ 254 ಔಷಧ ತಯಾರಿಕಾ ಕಂಪನಿಗಳ ಜಾಲವನ್ನು ಬಯಲಿಗೆಳೆದಿದೆ.

2

ಪರಿಶೀಲನೆ ವೇಳೆ 160 ರೂ. ಔಷಧಿಗೆ 7,110 ರೂ. ಎಂಆರ್‌ಪಿ ಮತ್ತು ಕ್ಯಾನ್ಸರ್ ಔಷಧಿಯಾದ ಸೈಟ್ಯಾಕ್ಸ್ 100ಎಂಜಿ ಲ್ಯಾಂಡಿಂಗ್ ವೆಚ್ಚ 342 ರೂ. ಇದ್ದು 3,836 ರೂ. ಎಂಆರ್‌ಪಿ ನಿಗದಿಪಡಿಸಿರುವುದು ಬೆಳಕಿಗೆ ಬಂದಿದೆ.

3

ಈ ಕಂಪನಿಗಳ ಪಟ್ಟಿಯನ್ನು ಸಿದ್ಧಪಡಿಸಿರುವ ಎಫ್‌ಡಿಎ ಆಯುಕ್ತ ಕೆ. ಶ್ರೀನಿವಾಸ್, ತುರ್ತಾಗಿ ದರಗಳನ್ನು ನಿಯಂತ್ರಣಕ್ಕೆ ತರುವಂತೆ ಮತ್ತು ಟ್ರೇಡ್ ಮಾರ್ಜಿನ್‌ಗೆ ಗರಿಷ್ಠ ಮಿತಿ ನಿಗದಿಪಡಿಸುವಂತೆ ಕೋರಿ ಕೇಂದ್ರದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದಾರೆ.