
ಬೆಂಗಳೂರಿನಲ್ಲಿ AI ಕ್ಯಾಮರಾಗಳ ತಾಂತ್ರಿಕ ದೋಷ ಮುಂದುವರೆದಿದ್ದು, ಚಾಲಕ ಸೀಟ್ ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಮೂರು ಬೇರೆ ಬೇರೆ ಬಿಎಂಟಿಸಿ ಬಸ್ಗಳಿಗೆ ತಲಾ 500 ರೂಪಾಯಿ ದಂಡ ವಿಧಿಸಲಾಗಿದೆ.
ವಿಧಾನಸೌಧ ಬಳಿ ಸಿಗ್ನಲ್ನಲ್ಲಿ ನಿಂತಿದ್ದ ಬಸ್ಗೂ ಹಾಗೂ ಹೆಣ್ಣೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್ಗಳಿಗೂ ಈ ದಂಡ ಬಿದ್ದಿರುವುದು ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.
ಈ ಹಿಂದೆ ಕಾರು ಚಾಲಕನಿಗೆ ಹೆಲ್ಮೆಟ್ ಧರಿಸಿಲ್ಲ ಎಂದು ದಂಡ ವಿಧಿಸಿದ ಘಟನೆ ಸೇರಿದಂತೆ ಇಂತಹ ಸರಣಿ ಎಡವಟ್ಟುಗಳು ಸಾರ್ವಜನಿಕರಿಗೆ ಅನಗತ್ಯ ತೊಂದರೆ ಉಂಟುಮಾಡುತ್ತಿವೆ.