
ಮೃತಪಟ್ಟವರ ಹೆಸರು ಮತದಾರರ ಕರಡು ಪಟ್ಟಿಯಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರದರ್ಶಿಸಿದ್ದ 8 ಜನರ ಮರಣ ಪ್ರಮಾಣ ಪತ್ರಗಳು ಅಸಲಿ ಎಂದು ಮತದಾರರ ನೋಂದಣಾಧಿಕಾರಿಗಳು ವರದಿ ನೀಡಿದ್ದಾರೆ.
ಶಾಸಕರ ಆರೋಪದ ವಿರುದ್ಧ ಕೆಲವರು ತಾವು ಜೀವಂತವಾಗಿದ್ದೇವೆ ಎಂದು ಡಿಸಿ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ್ದರೂ, ನೈಜವಾಗಿ ಮೃತಪಟ್ಟವರೇ ಬೇರೆ ಮತ್ತು ಜೀವಂತವಾಗಿದ್ದೇವೆ ಎಂದು ಬಂದವರೇ ಬೇರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಶೇಖ್ ಅವರ ತಂದೆ 2025ರಲ್ಲಿ ಮೃತಪಟ್ಟಿದ್ದರೂ ಅವರ ಹೆಸರೂ ಎಸ್ಐಆರ್ ಪಟ್ಟಿಯಲ್ಲಿ ಪತ್ತೆಯಾಗಿದ್ದು, ಕಾಂಗ್ರೆಸ್ ಪಕ್ಷವೇ ಅಕ್ರಮದಲ್ಲಿ ಭಾಗಿಯಾಗಿದೆ ಎಂದು ಯತ್ನಾಳ್ ಬೆಂಬಲಿಗರು ಆರೋಪಿಸಿದ್ದಾರೆ.