
ನೀಟ್-ಯುಜಿ ಪರೀಕ್ಷಾ ಅಕ್ರಮದ ವಿರುದ್ಧ ಪ್ರತಿಭಟಿಸಿದ್ದ 'ಕಾಕ್ರೋಚ್ ಜನತಾ ಪಾರ್ಟಿ' ಸ್ಥಾಪಕ ಅಭಿಜೀತ್ ದೀಪ್ಕೆ ಅವರ ವಿದೇಶಿ ಶಿಕ್ಷಣದ ಖರ್ಚು ಮತ್ತು ನಿಧಿ ಸಂಗ್ರಹಣೆ ಬಗ್ಗೆ ತನಿಖೆಗೆ ದೂರು ಸಲ್ಲಿಕೆಯಾಗಿದೆ.
ಸೂರತ್ ಮೂಲದ ಆರ್ಟಿಐ ಕಾರ್ಯಕರ್ತ ಅಮಿತ್ ತಿವಾರಿ ಅವರು ಚುನಾವಣಾ ಆಯೋಗ ಮತ್ತು ಜಿಎಸ್ಟಿ ಅಧಿಕಾರಿಗಳಿಗೆ ದೂರು ನೀಡಿ, ಸಿಜೆಪಿ ಸಂಸ್ಥೆಯ ಆರ್ಥಿಕ ಮೂಲಗಳ ಬಗ್ಗೆ ಪರಿಶೀಲನೆಗೆ ಒತ್ತಾಯಿಸಿದ್ದಾರೆ.
ಕಪಿಲ್ ಸಿಬಲ್ ಅವರು ನೀಟ್ ಪ್ರತಿಭಟನಾಕಾರರಿಗೆ ನೀಡಿದ 1 ಕೋಟಿ ರೂ. ಕೊಡುಗೆಗೆ ಶೇ. 18 ರಷ್ಟು ಜಿಎಸ್ಟಿ ಅನ್ವಯವಾಗುತ್ತದೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲು ಮನವಿ ಮಾಡಲಾಗಿದೆ.