
ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ದೇಶದ ಕೀರ್ತಿ ಹೆಚ್ಚಿಸಿದ್ದ ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್, ಗೋವಾ ಮೂಲದ ಎಫ್ಎಲ್ವೈ91 ಕಂಪನಿಗೆ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ.
ಅಭಿನಂದನ್ ಅವರು ಪ್ರಸ್ತುತ ಗೋವಾ ಮತ್ತು ಹೈದರಾಬಾದ್ ನಡುವೆ ಸಂಚರಿಸುವ ಎಟಿಆರ್ ವಿಮಾನಗಳ ತರಬೇತಿಯಲ್ಲಿ ನಿರತರಾಗಿದ್ದು, ತರಬೇತಿ ಪೂರ್ಣಗೊಂಡ ಬಳಿಕ ವಾಣಿಜ್ಯ ವಿಮಾನಗಳನ್ನು ಚಾಲನೆ ಮಾಡಲಿದ್ದಾರೆ.
2019ರ ಫೆಬ್ರವರಿ 27ರಂದು ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದ ಅಭಿನಂದನ್ ಅವರಿಗೆ, ಅವರ ಶೌರ್ಯಕ್ಕಾಗಿ ಭಾರತ ಸರ್ಕಾರ 2021ರಲ್ಲಿ ವೀರ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.