
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಬಾಂಡೆ ಗ್ರಾಮದ ಕೃಷಿಕನ ಮಗ ಇಗ್ನಾಸಿಯಸ್ ಪ್ರಕಾಶ್ ಬಡಾ ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಲಾಯ್ಡ್ಸ್ ಮೆಟಲ್ಸ್ ಆ್ಯಂಡ್ ಎನರ್ಜಿ ಸಂಸ್ಥೆಯ ಪ್ರಾಯೋಜಕತ್ವದ ಅಡಿಯಲ್ಲಿ ಅವರು ಆಸ್ಟ್ರೇಲಿಯಾದ ಪರ್ತ್‌ನಲ್ಲಿ ಇನ್ನೋವೇಶನ್ ಮತ್ತು ಎಂಟರ್‌ಪ್ರೆನ್ಯೂರ್‌ಶಿಪ್‌ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದರು.
ವಿದೇಶದಲ್ಲಿ ಉನ್ನತ ಹುದ್ದೆ ಗಿಟ್ಟಿಸಬಹುದಾಗಿದ್ದ ಅವರು, ತಮಗೆ ನೆರವಾದ ಸಂಸ್ಥೆಯಲ್ಲೇ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ತನ್ನೂರಿನ ಅಭಿವೃದ್ಧಿಗಾಗಿ ಮರಳಿ ಸೇವೆ ಆರಂಭಿಸಿದ್ದಾರೆ.