
ಭಾರತೀಯ ಸೇನೆಯ ಮೇಜರ್ ನವ್ಯಾ ಶೇಖಾವತ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಎಯ್ಡ್-ಡಿ-ಕ್ಯಾಂಪ್ (ADC) ಆಗಿ ನೇಮಕಗೊಂಡಿದ್ದು, ಈ ಹುದ್ದೆ ಅಲಂಕರಿಸಿದ ಸೇನೆಯ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.
ರಾಷ್ಟ್ರಪತಿಯ ಐವರು ADCಗಳ ತಂಡದಲ್ಲಿ ಸ್ಥಾನ ಪಡೆದ ಎರಡನೇ ಮಹಿಳಾ ಅಧಿಕಾರಿಯಾಗಿರುವ ನವ್ಯಾ ಶೇಖಾವತ್, ಈ ಹಿಂದೆ 2025ರಲ್ಲಿ ನೌಕಾಪಡೆಯ ಯಶಸ್ವಿ ಸೊಲಂಕಿ ಈ ಹುದ್ದೆಗೇರಿದ ಮೊದಲ ಮಹಿಳೆಯಾಗಿದ್ದರು.
ಯುಪಿಎಸ್ಸಿ ನಡೆಸುವ ಸಿಡಿಎಸ್ ಪರೀಕ್ಷೆಯ ಮೂಲಕ ಸೇನೆಗೆ ಸೇರ್ಪಡೆಯಾದ ನವ್ಯಾ, ಆರ್ಮಿ ಸರ್ವಿಸ್ ಕಾರ್ಪ್ಸ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದು, ರಾಷ್ಟ್ರಪತಿ ಭವನದ ಅಧಿಕೃತ ಕಾರ್ಯಕ್ರಮಗಳಲ್ಲಿ ನೆರವಾಗುವ ಜವಾಬ್ದಾರಿ ನಿರ್ವಹಿಸಲಿದ್ದಾರೆ.