
ಚೀನಾದ ಅಗ್ಗದ ಸರಕುಗಳ ಡಂಪಿಂಗ್ ನೀತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಎಚ್ಚರಿಕೆಯನ್ನು ಯುರೋಪ್ ನಿರ್ಲಕ್ಷಿಸಿ ತಪ್ಪು ಮಾಡಿದೆ ಎಂದು ಬೆಲ್ಜಿಯಂ ಪ್ರಧಾನಿ ಬಾರ್ಟ್ ಡಿ ವೀವರ್ ಒಪ್ಪಿಕೊಂಡಿದ್ದಾರೆ.
ದೆಹಲಿಯಲ್ಲಿ ನಡೆದ ಸಿಐಐ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚೀನಾದ ಮಾರುಕಟ್ಟೆ ನೀತಿಗಳಿಂದ ಯುರೋಪ್‌ನ ದೇಶೀಯ ಕೈಗಾರಿಕಾ ತಳಹದಿ ದುರ್ಬಲಗೊಂಡಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಸೆಪ್ಟೆಂಬರ್ 2ರಂದು ಆರಂಭವಾದ ತಮ್ಮ ಭಾರತ ಪ್ರವಾಸದ ಅಂತ್ಯದಲ್ಲಿ, ಭಾರತವನ್ನು ನಂಬಿಕಸ್ಥ ಪಾಲುದಾರ ರಾಷ್ಟ್ರವೆಂದು ಕರೆದು ಆರ್ಥಿಕ ಮತ್ತು ರಾಜಕೀಯ ಸಂಬಂಧವನ್ನು ಬಲಪಡಿಸಲು ಬೆಲ್ಜಿಯಂ ಆಸಕ್ತಿ ತೋರಿದೆ.