
ಸೈದಾಪುರದ ಸಿಲ್ ಲ್ಯಾಬೊರೇಟರಿ ಪ್ರೈವೆಟ್ ಲಿಮಿಟೆಡ್‌ನಲ್ಲಿ ಬುಧವಾರ ರಾತ್ರಿ 1.30ರ ಸುಮಾರಿಗೆ ಸಲ್‌ಫ್ಯೂರಿಕ್ ಡೈ ಆಕ್ಸೈಡ್ ಸೋರಿಕೆಯಾಗಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ತೆಲಂಗಾಣದ ಕಟ್ಲ ಗಣೇಶ, ಮಧ್ಯಪ್ರದೇಶದ ವಿಕ್ರಂಸಿಂಗ್ ಮತ್ತು ಸಂಜಯ್‌ಸಿಂಗ್ ಮೃತಪಟ್ಟಿದ್ದು, ಇಬ್ಬರು ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಂಪನಿಯ ಮ್ಯಾನೇಜರ್ ಕೆ.ವಿ. ಮೂರ್ತಿ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಮೃತಪಟ್ಟವರ ಕುಟುಂಬಕ್ಕೆ ತಲಾ ₹20 ಲಕ್ಷ ಪರಿಹಾರ ನೀಡುವುದಾಗಿ ಕಂಪನಿ ಭರವಸೆ ನೀಡಿದೆ.