
ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯವು ಐಸಿಸ್ ಉಗ್ರ ಸಂಘಟನೆಯೊಂದಿಗೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಸೈಯದ್ ಫಸಿಯುರ್ ರೆಹಮಾನ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಈ ಪ್ರಕರಣದಲ್ಲಿ ಒಟ್ಟು 20 ಆರೋಪಿಗಳ ವಿರುದ್ಧ 3 ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಲಾಗಿದ್ದು, ರೆಹಮಾನ್‌ಗೆ 48 ಸಾವಿರ ರೂಪಾಯಿ ದಂಡವನ್ನೂ ವಿಧಿಸಲಾಗಿದೆ.
ಆರೋಪಿಯು ಕಾಡಿನಲ್ಲಿ ತರಬೇತಿ ನೀಡಲು ಟೆಂಟ್‌ಗಳು ಮತ್ತು ಚಾಕುಗಳನ್ನು ಖರೀದಿಸಿ ನೆರವಾಗಿದ್ದಲ್ಲದೆ, ಟಾರ್ಗೆಟ್ ಕಿಲ್ಲಿಂಗ್ಸ್ ನಡೆಸಲು ಸಂಚು ರೂಪಿಸಿದ್ದ ಎಂದು ತನಿಖೆಯಲ್ಲಿ ದೃಢಪಟ್ಟಿದೆ.