
ಮಿಡ್ಫೀಲ್ಡರ್ ಸೋಹಮ್ ವರ್ಷ್ಣೇಯ ಅವರು ಬೆಂಗಳೂರು ಫುಟ್ಬಾಲ್ ಕ್ಲಬ್ (ಬಿಎಫ್ಸಿ) ಜೊತೆಗಿನ ತಮ್ಮ ಒಪ್ಪಂದವನ್ನು 2028–29ರ ಋತುವಿನ ಅಂತ್ಯದವರೆಗೆ ವಿಸ್ತರಿಸಿಕೊಂಡಿದ್ದಾರೆ.
22 ವರ್ಷದ ಸೋಹಮ್ 2025–26ರ ಐಎಸ್ಎಲ್ ಆವೃತ್ತಿಯಲ್ಲಿ ಎಂಟು ಪಂದ್ಯಗಳನ್ನು ಆಡಿದ್ದು, ಬಿಎಫ್ಸಿ ಬಿ ತಂಡದ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.
ಸೆಪ್ಟೆಂಬರ್ 2025ರಲ್ಲಿ ಕತಾರ್ನಲ್ಲಿ ನಡೆದ ಎಎಫ್ಸಿ 23 ವರ್ಷದೊಳಗಿನವರ ಏಷ್ಯನ್ ಕಪ್ ಕ್ವಾಲಿಫೈಯರ್ಸ್ನಲ್ಲಿ ಸೋಹಮ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು.