
ಮೈಸೂರು ದಸರಾದಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬರುತ್ತಿದ್ದ ಐತಿಹಾಸಿಕ ವಜ್ರಮುಷ್ಟಿ ಕಾಳಗವು ಇದೇ ಮೊದಲ ಬಾರಿಗೆ ರದ್ದಾಗಿದೆ.
ಆಡಳಿತ ಮಂಡಳಿ ಹಾಗೂ ಪೊಲೀಸರ ನಡುವಿನ ಸಮನ್ವಯದ ಕೊರತೆ ಹಾಗೂ ಭದ್ರತೆಯ ಕಾರಣದಿಂದ ಜಟ್ಟಿಗಳನ್ನು ಒಳಗೆ ಬಿಡಲು ತಡವಾಗಿದ್ದರಿಂದ ಈ ಅಚರಣೆ ರದ್ದಾಯಿತು.
ಸಮಯ ಮೀರಿಹೋಗಿದ್ದರಿಂದ ರಾಜವಂಶಸ್ಥ ಯದುವೀರ ಒಡೆಯರ್ ಅನಿವಾರ್ಯವಾಗಿ ಕಾಳಗವನ್ನು ರದ್ದುಗೊಳಿಸಿ ಮುಂದಿನ ಧಾರ್ಮಿಕ ಕಾರ್ಯಗಳಿಗೆ ತೆರಳಿದರು.