
ರಾಯಚೂರಿನ ಮಾನ್ವಿ ಪಟ್ಟಣದಲ್ಲಿ 70 ವರ್ಷದ ಮೊಹಮ್ಮದ್ ಶರ್ಫುದ್ದಿನ್ ಎಂಬುವರು ಜೀವಂತವಾಗಿದ್ದರೂ, ಅವರ ಹೆಸರಿನಲ್ಲಿ ನಕಲಿ ಮರಣ ಪ್ರಮಾಣಪತ್ರ ಸೃಷ್ಟಿಸಿ ಆಸ್ತಿ ಕಬಳಿಸಲಾಗಿದೆ.
2025ರಲ್ಲಿ ಕಂದಾಯ ಇಲಾಖೆ ನಡೆಸಿದ ತನಿಖೆಯಲ್ಲಿ ಶರ್ಫುದ್ದಿನ್ ಜೀವಂತವಾಗಿರುವುದು ದೃಢಪಟ್ಟಿದ್ದರೂ, ಪುರಸಭೆಯ ಅಧಿಕಾರಿಗಳು ಶಾಮೀಲಾಗಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ತಮ್ಮ 6 ಮನೆ ಮತ್ತು 2 ಅಂಗಡಿಗಳನ್ನು ಮರಳಿ ಪಡೆಯಲು ವೃದ್ಧ ಶರ್ಫುದ್ದಿನ್ ಕಚೇರಿಗಳಿಗೆ ಅಲೆಯುತ್ತಿದ್ದು, ಈ ಬಗ್ಗೆ ಸಮಗ್ರ ತನಿಖೆಗೆ ಸ್ಥಳೀಯ ಹೋರಾಟಗಾರರು ಒತ್ತಾಯಿಸಿದ್ದಾರೆ.