
ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ನಾಗರಿಕ ಸೇವೆಗಳ ಮುಖ್ಯ ಪರೀಕ್ಷೆಯ ಫಲಿತಾಂಶವನ್ನು ಗುರುವಾರ ಪ್ರಕಟಿಸಿದ್ದು, ಪರೀಕ್ಷೆ ಬರೆದವರಲ್ಲಿ ಹೆಚ್ಚಿನ ಸಂಖ್ಯೆಯ ಅಭ್ಯರ್ಥಿಗಳು ಸಂದರ್ಶನಕ್ಕೆ ಆಯ್ಕೆಯಾಗಿದ್ದಾರೆ.
ಈ ಮುಖ್ಯ ಪರೀಕ್ಷೆಯು ಪ್ರಸಕ್ತ ವರ್ಷದ ಆಗಸ್ಟ್ 21ರಿಂದ 30ರವರೆಗೆ ನಡೆದಿತ್ತು ಎಂದು ಆಯೋಗ ತಿಳಿಸಿದೆ.
ಆಯ್ಕೆಯಾದವರ ಪಟ್ಟಿ ಮತ್ತು ಸಂದರ್ಶನದ ಆಹ್ವಾನ ಪತ್ರವನ್ನು upsc.gov.in ಹಾಗೂ upsconline.nic.in ಜಾಲತಾಣಗಳಿಂದ ಡೌನ್ಲೋಡ್ ಮಾಡಿಕೊಳ್ಳಬಹುದು.