
ಪಾಕಿಸ್ತಾನದಿಂದ ಪ್ರಾಯೋಜಿತವಾಗುವ ಯಾವುದೇ ಹೊಸ ಭಯೋತ್ಪಾದನಾ ಕೃತ್ಯ ನಡೆದರೂ ಭಾರತೀಯ ಸೇನೆಯು ಹಿಂದೆಂದಿಗಿಂತಲೂ ಅತ್ಯಂತ ಕಠಿಣ ಹಾಗೂ ಬಲವಾದ ತಿರುಗೇಟು ನೀಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.
ಭಾರತದ ರಕ್ಷಣಾ ಉತ್ಪಾದನೆಯು 2014ರಲ್ಲಿ 40,000 ಕೋಟಿ ರೂ. ಇದ್ದದ್ದು ಈಗ 1.78 ಲಕ್ಷ ಕೋಟಿ ರೂ. ದಾಟಿದೆ ಎಂದು ಅವರು ಸಾರ್ವಕಾಲಿಕ ದಾಖಲೆಯನ್ನು ವಿವರಿಸಿದ್ದಾರೆ.
ಭಾರತದ ರಫ್ತು 39,000 ಕೋಟಿ ರೂ.ಗೆ ತಲುಪಿದ್ದು ಜಗತ್ತಿನ ಸುಮಾರು 100 ದೇಶಗಳಿಗೆ ತಲುಪುತ್ತಿದ್ದು, 2029ರ ವೇಳೆಗೆ 50,000 ಕೋಟಿ ರೂ. ರಫ್ತು ಸಾಧಿಸುವ ಗುರಿಯಿದೆ ಎಂದು ತಿಳಿಸಿದರು.