
ಈ ಬಾರಿಯ ಮೈಸೂರು ಯುವ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಲು ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವ್ ಅವರನ್ನು ಆಯ್ಕೆ ಮಾಡಲಾಗಿದೆ.
ಸೆಪ್ಟೆಂಬರ್ 4ರಂದು ಯುವ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಸೋಮಶೇಖರ್ ನೇತೃತ್ವದ ತಂಡ ಚೆನ್ನೈಗೆ ತೆರಳಿ ಪ್ರಭುದೇವ್ ಅವರಿಗೆ ಅಧಿಕೃತ ಆಹ್ವಾನ ನೀಡಿದೆ.
ಸಮಿತಿಯ ಆಹ್ವಾನವನ್ನು ಪ್ರಭುದೇವ್ ಸಂತೋಷದಿಂದ ಸ್ವೀಕರಿಸಿದ್ದು, ಮೈಸೂರು ದಸರಾ ಮಹೋತ್ಸವದ ಭಾಗವಾಗಲಿದ್ದಾರೆ.