
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯಲ್ಲಿ ಸರಕು ವಾಹನಗಳು ಮತ್ತು ಕೃಷಿ ಉತ್ಪನ್ನಗಳಿಗೆ ಹೊಸದಾಗಿ ಪ್ರವೇಶ ಶುಲ್ಕ ವಿಧಿಸಲು ಪಾಲಿಕೆ ಮುಂದಾಗಿದ್ದು, ಟೆಂಡರ್ ಆಹ್ವಾನಿಸಲಾಗಿದೆ.
ಹೊಸ ನಿಯಮದಂತೆ ಸರಕು ವಾಹನಗಳಿಗೆ 75 ರಿಂದ 350 ರೂ. ಹಾಗೂ ತರಕಾರಿ, ಹಣ್ಣು, ಮಾಂಸದ ಪ್ರತಿ ಬಾಕ್ಸ್ ಅಥವಾ ಮೂಟೆಗೆ 5 ರಿಂದ 10 ರೂ. ಶುಲ್ಕ ನಿಗದಿಯಾಗಿದೆ.
ಈ ಹೆಚ್ಚುವರಿ ವೆಚ್ಚದಿಂದಾಗಿ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಶೇ 10 ರಿಂದ 15 ರಷ್ಟು ಏರಿಕೆಯಾಗುವ ಸಾಧ್ಯತೆಯಿದ್ದು, ಗ್ರಾಹಕರ ಮೇಲೆ ಆರ್ಥಿಕ ಹೊರೆ ಬೀಳಲಿದೆ.