ಕೇಂದ್ರ ಸರ್ಕಾರದಿಂದ ಕಳೆದ ಒಂದೂವರೆ ವರ್ಷದಿಂದ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗದ ಕಾರಣ ರಾಜ್ಯದ ಶೇ 90ರಷ್ಟು ಗ್ರಾಮ ಪಂಚಾಯಿತಿಗಳು ನಿರ್ವಹಣೆಗೆ ಪರದಾಡುತ್ತಿವೆ.
ಚಿಕ್ಕಮಗಳೂರು ಸೇರಿದಂತೆ ಹಲವೆಡೆ ಬೀದಿ ದೀಪ ಮತ್ತು ಕುಡಿಯುವ ನೀರಿನ ಪಂಪ್ ಸೆಟ್ ಗಳ ವಿದ್ಯುತ್ ಬಿಲ್ ಲಕ್ಷಗಟ್ಟಲೆ ಬಾಕಿ ಉಳಿದಿದ್ದು, ಮೆಸ್ಕಾಂ ಅಧಿಕಾರಿಗಳು ನೋಟಿಸ್ ಜಾರಿಗೊಳಿಸುತ್ತಿದ್ದಾರೆ.
ಅನುದಾನ ತಡೆಹಿಡಿಯಲು ದಾಖಲೆಗಳಲ್ಲಿ ವ್ಯತ್ಯಾಸವಿರುವುದು, ದಂಡದ ಬಡ್ಡಿ ಪಾವತಿಸದಿರುವುದು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸದಿರುವುದು ಕಾರಣ ಎಂದು ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ತಿಳಿಸಿದ್ದಾರೆ.