
ಹಾವೇರಿ ನಗರದ ಹೊರವಲಯದ ತರಳುಬಾಳು ಬಡಾವಣೆಯಲ್ಲಿ ಅಲೆಮಾರಿ ಕುಟುಂಬಗಳ ಮಕ್ಕಳಿಗಾಗಿ ವಿಭೂತಿ ಶೆಟ್ಟಿ ಅವರು ಗುಡಿಸಲಿನಲ್ಲಿ ವಿನೂತನ ಗ್ರಂಥಾಲಯವನ್ನು ಆರಂಭಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಪುಸ್ತಕ ಪ್ರಾಧಿಕಾರದ ಪರಿಕಲ್ಪನೆಯಡಿಯಲ್ಲಿ ನಾಲ್ಕು ತಿಂಗಳ ಹಿಂದೆ ಆರಂಭಗೊಂಡಿರುವ ಈ ಗ್ರಂಥಾಲಯದಲ್ಲಿ 2000ಕ್ಕೂ ಹೆಚ್ಚು ಪುಸ್ತಕಗಳಿವೆ.
ಜೋಪಡಿಗಳಲ್ಲಿ ವಾಸಿಸುತ್ತಿರುವ 18ಕ್ಕೂ ಹೆಚ್ಚು ಕುಟುಂಬಗಳ 25ಕ್ಕೂ ಅಧಿಕ ಮಕ್ಕಳಿಗೆ ಈ ಗ್ರಂಥಾಲಯವು ಶಿಕ್ಷಣ ಮತ್ತು ಓದುವ ಹವ್ಯಾಸ ಬೆಳೆಸಿಕೊಳ್ಳಲು ಸಹಕಾರಿಯಾಗಿದೆ.