
ದಸರಾ ಜಂಬೂಸವಾರಿಯನ್ನು ಯಶಸ್ವಿಗೊಳಿಸಿದ ಆನೆಗಳನ್ನು ಬನ್ನಿಮಂಟಪದಿಂದ ಬುಧವಾರ ತಡರಾತ್ರಿ ಲಾರಿಗಳ ಮೂಲಕ ಅರಮನೆ ಆವರಣಕ್ಕೆ ತಲುಪಿಸಲಾಗಿದ್ದು, ಮಾವುತರು ಮತ್ತು ಕಾವಾಡಿಗಳು ಬಿಡಾರ ತಲುಪಿದ್ದಾರೆ.
ಚಿನ್ನದ ಅಂಬಾರಿಯನ್ನು ಸಹ ಬನ್ನಿಮಂಟಪದಿಂದ ವಾಹನದಲ್ಲಿ ಪೊಲೀಸ್ ಭದ್ರತೆಯಲ್ಲಿ ಅರಮನೆಗೆ ತಂದು ಇಡಲಾಗಿದೆ.
ಅಕ್ಟೋಬರ್ 22ರ ಬೆಳಿಗ್ಗೆ 7ರಿಂದ ಮಧ್ಯಾಹ್ನ 1ರವರೆಗೆ ಅರಮನೆ ಆವರಣದಲ್ಲಿ ಆನೆಗಳ ತೂಕ ಹಾಕುವ ಕಾರ್ಯ, ಪೂಜೆ ಹಾಗೂ ಮರುಪಯಣ ಕಾರ್ಯಕ್ರಮ ನಡೆಯಲಿದೆ.