
ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ನಡೆದ ಯುಪಿ ಟಿ20 ಲೀಗ್ ಫೈನಲ್ನಲ್ಲಿ ಮೀರತ್ ಮೇವರಿಕ್ಸ್ ತಂಡವು ಲಕ್ನೋ ಫಾಲ್ಕನ್ಸ್ ವಿರುದ್ಧ 94 ರನ್ಗಳ ಭರ್ಜರಿ ಜಯ ಸಾಧಿಸಿ ಪ್ರಶಸ್ತಿ ಗೆದ್ದಿದೆ.
ದಿವ್ಯಾಂಶ್ ಜೋಶಿ ಕೇವಲ 40 ಎಸೆತಗಳಲ್ಲಿ 105 ರನ್ ಸಿಡಿಸಿದರೆ, ಬೌಲರ್ ವಿಶಾಲ್ ಚೌಧರಿ 24 ರನ್ ನೀಡಿ 4 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ನಿಗದಿತ 20 ಓವರ್ಗಳಲ್ಲಿ 203 ರನ್ ಗಳಿಸಿದ್ದ ಮೀರತ್ ಮೇವರಿಕ್ಸ್, ಲಕ್ನೋ ಫಾಲ್ಕನ್ಸ್ ತಂಡವನ್ನು 16 ಓವರ್ಗಳಲ್ಲಿ ಕೇವಲ 109 ರನ್ಗಳಿಗೆ ಆಲೌಟ್ ಮಾಡುವ ಮೂಲಕ ಎರಡನೇ ಬಾರಿಗೆ ಲೀಗ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.