
‘ಡ್ರ್ಯಾಗನ್’ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದ ನಟ ಜೂನಿಯರ್ ಎನ್‌ಟಿಆರ್ ಅವರಿಗೆ ಯಶಸ್ವಿ ಆರ್ಥ್ರೋಸ್ಕೊಪಿಕ್ ಶೋಲ್ಡರ್ ಸರ್ಜರಿ ನಡೆದಿದ್ದು, ಆಗಸ್ಟ್ 13ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಹೈದರಾಬಾದ್‌ನ ಕಿಮ್ಸ್ ಆಸ್ಪತ್ರೆಯ ವೈದ್ಯರಾದ ಡಾ. ಆರ್.ಎ. ಪೂರ್ಣಚಂದ್ರ ತೇಜಸ್ವಿ ಮತ್ತು ಡಾ. ನಿತಿನ್ ಬೆಜ್ಜಂಕಿ ಅವರ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆ ನೆರವೇರಿದೆ.
ನಟ ಸಂಪೂರ್ಣವಾಗಿ ಚೇತರಿಸಿಕೊಳ್ಳಲು 2ರಿಂದ 3 ತಿಂಗಳು ಸಮಯ ಹಿಡಿಯಲಿದ್ದು, ಸದ್ಯಕ್ಕೆ ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಆಸ್ಪತ್ರೆಯ ಹೆಲ್ತ್ ಬುಲೆಟಿನ್ ತಿಳಿಸಿದೆ.