
ಸಿಂಗಾಪುರ ಸರ್ಕಾರವು ಹೆಚ್ಚುತ್ತಿರುವ ಜೀವನ ವೆಚ್ಚದ ಹೊರೆ ಕಡಿಮೆ ಮಾಡಲು 24 ಲಕ್ಷಕ್ಕೂ ಹೆಚ್ಚು ನಾಗರಿಕರಿಗೆ ಸೆಪ್ಟೆಂಬರ್ 9ರಿಂದ 400 ರಿಂದ 600 ಸಿಂಗಾಪುರ ಡಾಲರ್ (ಸುಮಾರು 45,000 ರೂ.) ನಗದು ನೆರವು ನೀಡುತ್ತಿದೆ.
ಈ ಯೋಜನೆಯ ಲಾಭ ಪಡೆಯಲು 2026ರಲ್ಲಿ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಮತ್ತು 2025ರ ತೆರಿಗೆ ಮೌಲ್ಯಮಾಪನದ ಪ್ರಕಾರ ವಾರ್ಷಿಕ ಆದಾಯ 1,00,000 ಡಾಲರ್ಗಿಂತ ಕಡಿಮೆ ಇರಬೇಕು.
ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಗರಿಷ್ಠ 600 ಡಾಲರ್ ಸಿಗಲಿದ್ದು, ಆರ್ಥಿಕ ಒತ್ತಡವನ್ನು ಕಡಿಮೆ ಮಾಡುವುದು ಈ ವಿಶೇಷ ಪಾವತಿಯ ಮುಖ್ಯ ಉದ್ದೇಶವಾಗಿದೆ.