ಅಮೆರಿಕದ ಸಿಲಿಕಾನ್ ವ್ಯಾಲಿಯಲ್ಲಿ ನೆಲೆಸಿರುವ ಭಾರತೀಯ ಎಂಜಿನಿಯರ್‌ಗಳು ಹುಟ್ಟುಹಾಕಿರುವ 'ಓಸಾಟ್' (OSAAT) ಸ್ವಯಂಸೇವಾ ಸಂಸ್ಥೆಯು ಕರ್ನಾಟಕ ಸೇರಿದಂತೆ ದೇಶಾದ್ಯಂತ 150ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಮರುನಿರ್ಮಾಣ ಮಾಡಿದೆ.
2019ರ ಭೀಕರ ಪ್ರವಾಹದಿಂದ ಸಂಪೂರ್ಣ ಹಾನಿಯಾಗಿದ್ದ ಕರ್ನಾಟಕದ ಮೇಳವಂಕಿ ಸರ್ಕಾರಿ ಶಾಲೆಯನ್ನು ಓಸಾಟ್ ಸಂಸ್ಥೆ ಸಂಪೂರ್ಣವಾಗಿ ನವೀಕರಿಸಿ, 8 ಹೊಸ ಕೊಠಡಿಗಳು ಮತ್ತು ಗ್ರಂಥಾಲಯದೊಂದಿಗೆ ಮಾದರಿ ಶಾಲೆ ರೂಪಿಸಿದೆ.
ಪ್ರಸ್ತುತ ಈ ಶಾಲೆಯಲ್ಲಿ 1,000ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಸಂಸ್ಥೆಯು 2030ರ ವೇಳೆಗೆ 10 ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ಉತ್ತಮ ಮೂಲಭೂತ ಸೌಕರ್ಯ ತಲುಪಿಸುವ ಗುರಿ ಹೊಂದಿದೆ.