
ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸೇವೆ ನೀಡುತ್ತಿದ್ದ ಕೊನೆಯ ವಿಮಾನಯಾನ ಸಂಸ್ಥೆಯಾದ ‘ಸ್ಟಾರ್ ಏರ್’ ಬುಕಿಂಗ್ ಸ್ಥಗಿತಗೊಳಿಸಿದ್ದು, ನವೆಂಬರ್ 21ರಿಂದ ಕಾರ್ಯಾಚರಣೆ ಸಂಪೂರ್ಣ ನಿಲ್ಲಿಸುವ ನಿರೀಕ್ಷೆಯಿದೆ.
ಮುಂದೆ ಇಂಡಿಗೋ ಮತ್ತು ಸ್ಪೈಸ್ಜೆಟ್ ಸೇವೆಗಳು ಈಗಾಗಲೇ ಸ್ಥಗಿತಗೊಂಡಿರುವುದು, ಪ್ರಯಾಣಿಕರ ಬೇಡಿಕೆ ಕಡಿಮೆ ಇರುವುದು ಹಾಗೂ ಉಡಾನ್ ಯೋಜನೆಯ ಸಬ್ಸಿಡಿ ಅವಧಿ ಮುಕ್ತಾಯಗೊಂಡಿರುವುದು ಇದಕ್ಕೆ ಕಾರಣವಾಗಿದೆ.
ಪ್ರಸ್ತುತ ನಿಲ್ದಾಣದಲ್ಲಿ 200ಕ್ಕೂ ಹೆಚ್ಚು ಸಿಬ್ಬಂದಿಯಿದ್ದು, ತಿಂಗಳಿಗೆ 95 ಲಕ್ಷ ರೂಪಾಯಿ ವೇತನ ಹಾಗೂ ನಿರ್ವಹಣಾ ವೆಚ್ಚ ತಗುಲುತ್ತಿದ್ದು, ಮುಂದಿನ ಎರಡು ತಿಂಗಳಲ್ಲಿ ಸೇವೆ ಪುನರಾರಂಭಗೊಳ್ಳುವ ವಿಶ್ವಾಸವನ್ನು ಸಂಸದ ಬಿ.ವೈ. ರಾಘವೇಂದ್ರ ವ್ಯಕ್ತಪಡಿಸಿದ್ದಾರೆ.