
ಭಾರತೀಯ ಬ್ಯಾಂಕಿಂಗ್ ಸಿಬ್ಬಂದಿ ಆಯ್ಕೆ ಸಂಸ್ಥೆ (IBPS) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಲ್ಲಿನ 13,706 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಿದ್ದು, ಸೆಪ್ಟೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 579 ಹುದ್ದೆಗಳು ಲಭ್ಯವಿದ್ದು, ಇದರಲ್ಲಿ 279 ಆಫೀಸ್ ಅಸಿಸ್ಟೆಂಟ್ ಮತ್ತು 300 ಆಫೀಸರ್ ಸ್ಕೇಲ್-I ಹುದ್ದೆಗಳು ಸೇರಿವೆ.
ಆಫೀಸರ್ ಸ್ಕೇಲ್-I ಪೂರ್ವಭಾವಿ ಪರೀಕ್ಷೆ ನವೆಂಬರ್ 21-22 ರಂದು ಮತ್ತು ಆಫೀಸ್ ಅಸಿಸ್ಟೆಂಟ್ ಪರೀಕ್ಷೆ ಡಿಸೆಂಬರ್ 6, 12 ಮತ್ತು 13 ರಂದು ನಡೆಯಲಿದೆ.