Economy
ಹಬ್ಬದ ಋತುವಿನಲ್ಲಿ 2.7 ಲಕ್ಷ ಗಿಗ್ ಉದ್ಯೋಗ ಸೃಷ್ಟಿ ನಿರೀಕ್ಷೆ

ಹಬ್ಬದ ಋತುವಿನಲ್ಲಿ 2.7 ಲಕ್ಷ ಗಿಗ್ ಉದ್ಯೋಗ ಸೃಷ್ಟಿ ನಿರೀಕ್ಷೆ

prajavani2h
THE BRIEF
1

ಪ್ರಸಕ್ತ ಹಬ್ಬದ ಋತುವಿನಲ್ಲಿ ಇ-ಕಾಮರ್ಸ್ ಮತ್ತು ಲಾಜಿಸ್ಟಿಕ್ಸ್ ವಲಯಗಳಲ್ಲಿ 2.5 ಲಕ್ಷದಿಂದ 2.7 ಲಕ್ಷದವರೆಗೆ ತಾತ್ಕಾಲಿಕ ಗಿಗ್ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಅಡೆಕೊ ಇಂಡಿಯಾ ವರದಿ ತಿಳಿಸಿದೆ.

2

ಕಳೆದ ವರ್ಷದ ಇದೇ ಅವಧಿಯಲ್ಲಿ 2.16 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು, ಈ ಬಾರಿ ಶೇ 15ರಿಂದ ಶೇ 20ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ.

3

ಮೆಟ್ರೊ ನಗರಗಳಲ್ಲಿ ಗಿಗ್ ಕಾರ್ಮಿಕರ ವೇತನ ಶೇ 12ರಿಂದ 15ರಷ್ಟು ಮತ್ತು ದ್ವಿತೀಯ ಹಂತದ ನಗರಗಳಲ್ಲಿ ಶೇ 8ರಿಂದ 10ರಷ್ಟು ಏರಿಕೆಯಾಗಲಿದೆ ಎಂದು ವರದಿ ಹೇಳಿದೆ.