
ಫ್ರಾನ್ಸ್, ಬೆಲ್ಜಿಯಂ, ಇಟಲಿ ಹಾಗೂ ಅಮೆರಿಕ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಜೀವನ ವೆಚ್ಚ ಏರಿಕೆ, ಹಣದುಬ್ಬರ ಮತ್ತು ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ವಿರುದ್ಧ ಜನಸಾಮಾನ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಫ್ರಾನ್ಸ್ನಲ್ಲಿ ವಿದ್ಯಾರ್ಥಿಗಳಿಂದ ಆರಂಭವಾದ ಪ್ರತಿಭಟನೆ ತೀವ್ರಗೊಂಡು, ಪ್ಯಾರಿಸ್ನ ನೂರಕ್ಕೂ ಹೆಚ್ಚು ವರ್ಷಗಳ ಹಳೆಯದಾದ ಟೌನ್ ಹಾಲ್ ಕಟ್ಟಡಕ್ಕೆ ಪ್ರತಿಭಟನಾಕಾರರು ಬೆಂಕಿ ಇಟ್ಟಿದ್ದಾರೆ.
ಏಳು ಕೋಟಿ ಜನಸಂಖ್ಯೆಯ ಫ್ರಾನ್ಸ್ನಲ್ಲಿ ಐದೂವರೆ ಲಕ್ಷ ಜನರು ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದು ಅಲ್ಲಿಯ ಸರ್ಕಾರವೇ ಮಾಹಿತಿ ನೀಡಿದೆ.